ಕನ್ನಡ ಚಿತ್ರರಂಗದಲ್ಲಿ ತೂಗುದೀಪ ಚಿತ್ರದ ಮೂಲಕ ಜನಪ್ರಿಯ ಖಳನಾಯಕರಾದರು. ತಮ್ಮ ಜೀವನವನ್ನು ಕನ್ನಡ ಚಲನಚಿತ್ರರಂಗದಲ್ಲಿ ಖಳನಾಯಕರಾಗಿ, ಸಹನಟರಾಗಿ, ಹಾಸ್ಯನಟರಾಗಿ ಹಾಗೂ ಪೋಷಕನಟರಾಗಿ ನಟನೆಗಳ ಮೂಲಕವೇ ಪ್ರಖ್ಯಾತರಾದವರು.ಚಾಲೆಂಜಿಂಗ್ ಸ್ಟಾರ್ ದರ್ಶನ್, ತೂಗುದೀಪ ಶ್ರಿನಿವಾಸ ಇವರ ಪುತ್ರ. ತೂಗುದೀಪ ಶ್ರೀನಿವಾಸ ರವರು ಅವರ ತಂದೆ-ತಾಯಿಯ ೮ ಮಕ್ಕಳ ಪೈಕಿ 4ನೇಯ ಮುದ್ದು ಮಗ. ೧೯೪೩ರಲ್ಲಿ ಮುನಿಸ್ವಾಮಿ ಹಾಗೂ ಪಾರ್ವತಮ್ಮ ದಂಪತಿಗಳ ನಾಲ್ಕನೇಯ ಮಗನಾಗಿ ಹುಟ್ಟಿದರು. ಸಣ್ಣ ವಯಸ್ಸಿನಲ್ಲೇ ಅವರು ಅಪ್ಪಅಮ್ಮನನ್ನು ಕಳೆದುಕೊಂಡವರು. ಬಾಲ್ಯದ ದಿನಗಳಲ್ಲೇ ಇವರಿಗೆ ಸಿನಿಮಾ-ಚಿತ್ರರಂಗದ ಮೇಲೆ ತುಂಬಾ ಆಸಕ್ತಿ ಇತ್ತು. ಶಾಲಾ-ಕಾಲೇಜಿನಲ್ಲೂ ಕೂಡ ಅವರು ನಟಿಸುತ್ತಿದ್ದರು.೧೯೬೬ರಲ್ಲಿ ಮೂಡಿಬಂದ ಕೆ.ಎಸ್.ಎಲ್. ಸ್ವಾಮಿಯವರ ನಿರ್ಮಾಣದ, ಆರ್.ಜಿ. ಕೇಶವಮೂರ್ತಿಯವರ ನಿರ್ದೇಶನದ " ತೂಗುದೀಪ " ಎಂಬ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಂತೆಯೇ " ತೂಗುದೀಪ ಶ್ರೀನಿವಾಸ " ಎಂಬ ಹೆಸರು ಬಂತು. ಒಂದರ ಮೇಲೊಂದರಂತೆ ಚಲನಚಿತ್ರಗಳು ತೂಗುದೀಪ ಶ್ರೀನಿವಾಸ ರವರ ಯಶಸ್ಸು ತಂದುಕೊಟ್ಟವು. ಅವರು ನಟಿಸಿದ ಚಲನಚಿತ್ರಗಳಲ್ಲಿ ಮೇಯರ್ ಮುತ್ತಣ್ಣ, ಬಂಗಾರದ ಪಂಜರ , ಗಂಧದ ಗುಡಿ , ಕಳ್ಳ ಕುಳ್ಳ, ವಸಂತ ಲಕ್ಷ್ಮಿ, ಸಾಹಸ ಸಿಂಹ ಪ್ರಮುಖವಾದವುಗಳು... ವರನಟ ಡಾ. ರಾಜ್ ಕುಮಾರ್ ರವರ ಬಹುತೇಕ ಚಲನಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ'ರವರು ಖಳನಟ-ಸಹನಟ-ಪೋಷಕ ನಟರಾಗಿ ನಟಿಸಿದ್ದಾರೆ. == ನಟಿಸಿದ ಚಿತ್ರಗಳು == == ಉಲ್ಲೇಖಗಳು ==